ಮೀನು ಸಾಕಣೆ ಮಾಡುವುದು ಹೇಗೆ ? ಸುಲಭ ವಿಧಾನ : How to cultivation fish? Easy method

ಮೀನು ಸಾಕಣಿಕೆ ಮಾಡಲು ಹೆಚ್ಚು ಜನರು ಇಚ್ಚಿಸುತ್ತಾರೆ ಆದರೆ ಅವರಿಗೆ ಸರಿಯಾದ ಮಾರ್ಗದರ್ಶನದ ಕೊರತೆ ಇರುವುದನ್ನು ನಾವು ಕಾಣಬಹುದು . ಮೀನು ಸಾಕಣಿಕೆಯನ್ನು ' ಪಿಸ್ಕಲ್ಚರ್ ' ಎಂದು ಕರೆಯುತ್ತಾರೆ . ಇತ್ತೀಚಿನ ದಿನಗಳಲ್ಲಿ ಮೀನು ಸಾಕಾಣಿಕೆ ಒಂದು ಲಾಭದಾಯಕ ಉದ್ಯಮವಾಗಿ ಹೊರಹೊಮ್ಮಿದೆ , ಇದರ ಬಗ್ಗೆ ಹೆಚ್ಚು ತಿಳಿಯಲು ನೀವು ಇಚ್ಚಿಸುತ್ತಿದ್ದಾರೆ ನೀವು ಸರಿಯಾದ ಜಾಗದಲ್ಲಿದ್ದೀರಿ . 

ಮೀನು ಸಾಕಾಣಿಕೆ ಬಗ್ಗೆ ಒಂದೊಂದಾಗೆ ತಿಳಿಯೊಣ .





1. ಕೊಳದ  ನಿರ್ಮಾಣ :

ನಿಮಗೆ ಅನುಕೂಲವಾದ ಮತ್ತು ಮೀನು ಕೃಷಿಗೆ ಸರಿ ಹೊಂದುವ ಜಾಗವನ್ನು ಮೊದಲು ಆಯ್ಕೆ ಮಾಡುವುದು ಅಗತ್ಯ ಆಯ್ಕೆ ಮಾಡಿದ ಜಾಗದಲ್ಲಿ ಒಂದು ಡೈಕ್ ನಿರ್ಮಾಣ ಮಾಡಬೇಕು ಇದಕ್ಕಾಗಿ ನುರಿತ ಅಥವಾ ಅನುಭವ ಹೊಂದಿದ ಕೆಲಸಗಾರರಿಂದ ಮಾಡಿಸುವುದು ಉತ್ತಮ .

ಮುಖ್ಯವಾಗಿ ನೀರಿನ ಒಳಹರಿವು ಮತ್ತು ಹೊರಹರಿವು ಸರಿಯಾದ ಕ್ರಮದಲ್ಲಿ ಮಾಡುವುದು ಅಗತ್ಯ ಹಳೆಯ ನೀರನ್ನು ಹೊರ ಹಾಕಿ ಹೊಸ ನೀರನ್ನು ಕೊಳಕ್ಕೆ ಬಿಡಲು ಇದು ಮುಖ್ಯವಾಗಿರುತ್ತದೆ .


2. ಕರ್ನಾಟಕದಲ್ಲಿ ಲಭ್ಯವಿರುವ ಮೀನುಗಳು  :

  • ರೋಹು 
  • ಮೃಗಾಲ್ 
  • ಟಿಲಾಪಿಯಾ 
  • ಕಾಟ್ಲಾ 
  • ಕ್ಯಾಟಫಿಶ್ 
  • ಸಿಲ್ವರಫಿಶ್ 
  • ಬಾಟಾ 
ಈ ಮೀನುಗಳನ್ನು ಹೊರತು ಪಡಿಸಿ ಇನ್ನೂ ಹಲವಾರು ಮೀನುಗಳು ಸಾಕಣೆಗೆ ಲಭ್ಯವಿರುತ್ತದೆ .


3. ಅಗತ್ಯವಿರುವ ಕೌಶಲ್ಯ  :

ಮೀನು ಸಾಕಣಿಕೆಗೆ ಕೌಶಲ್ಯದ ಆಗತ್ಯತೆ ಇದೆ , ಕೌಶಲ್ಯವೆಂದರೆ ನೀರಿನ ಗುಣಮಟ್ಟ ನಿಯಂತ್ರಣ , ರೋಗ ನಿಯಂತ್ರಣ ಮತ್ತು ಇತರೆ ನಿರ್ವಹಣೆ ಆಗಿದೆ . 

  • ನೀರಿನ ಪರೀಕ್ಷೆ ಮಾಡುವುದು 
  • ಅಪಾಯ ನಿರ್ವಹಣೆ 
  • ಮೀನಿನ ಮೊಟ್ಟೆ ಸರಿಯಾದ ಕ್ರಮದಲ್ಲಿ ನಿರ್ವಹಣೆ 
  • ಸರಿಯಾದ ಆಹಾರ ಪೂರೈಕೆ 

ಮೀನು ಸಾಕಣೆಗೆ ನಿಮ್ಮ ಹತ್ತಿರದ ಕೇಂದ್ರದಿಂದ ಮಾಹಿತಿ ಪಡೆಯುವುದು ಅಗತ್ಯ , ಇದರ ಜೊತೆಗೆ ಸರ್ಕಾರದಿಂದ ಸಹಾಯಧನ ನೀಡುವ ಯೋಜನೆಗಳು ಲಭ್ಯವಿದೆ ಮತ್ತು ಕಿಸಾನ್ ಮತ್ಸ್ಯ ಲೋನ್ ಪಡೆಯಲು ಅವಕಾಶ ಇದೆ . 
ಸರಿಯಾದ ಕ್ರಮ ಪಾಲನೆ ಮಾಡಿ ಮೀನು ಸಾಕಣೆ ಆರಂಭಿಸಿ ಯಶಸ್ಸು ಕಂಡುಕೊಳ್ಳಳ್ಳಿ .

Post a Comment (0)
Previous Post Next Post