ಯುವನಿಧಿ 2023ರ ಸಂಪೂರ್ಣ ಮಾಹಿತಿ : ದಿನಾಂಕ , ಹಣ ಪಾವತಿ , ಅರ್ಹತೆ ಇತರೆ ಮಾಹಿತಿ : Yuvanidhi 2023: Date, payment, eligibility and other details












ಕರ್ನಾಟದ ನಿರುದ್ಯೋಗಿಗಳಿಗೆ ಸಹಾಯ ಧನ ನೀಡುವ ದೃಷ್ಟಿಯಿಂದ ಕರ್ನಾಟಕ ಸರ್ಕಾರವು ಯುವನಿಧಿ ಎಂಬ ಹೊಸ ಯೋಜನೆ ಒಂದನ್ನು ಜಾರಿಗೆ ತಂದಿದೆ , ಸರ್ಕಾರದ ಕೊನೆಯ ಗ್ಯಾರಂಟಿ ಯೋಜನೆಯದ ಇದನ್ನು ಜಾರಿಗೆ ತರಲು ಎಲ್ಲ ಸಿದ್ದತೆಗಳು ಆರಂಭ ಗೊಂಡಿದ್ದು  , ನೀವು ಅರ್ಜಿಸಲ್ಲಿಸಲು ಅರ್ಹರಾಗಿದ್ದಲಿ ನಿಮಗೆ ಬೇಕಾದ ಉಪಯುಕ್ತ ಮಾಹಿತಿ ಇಲ್ಲಿವೆ .

2022-23 ರಲ್ಲಿ ತೇರ್ಗಡೆ ಆದಂತಹ  ಪದವೀದರ ನಿರುದ್ಯೋಗಿ ಮತ್ತು ಡಿಪ್ಲೋಮಾ ನಿರುದ್ಯೋಗಿಗಳಿಗೆ  ಸಹಾಯ ಧನ ನೀಡುವುದೆ ಈ ಯೋಜನೆಯ ಮುಖ್ಯ ಗುರಿಯಾಗಿದೆ .

ಕರ್ನಾಟಕ ಸರ್ಕಾರವು ನೀಡಿರುವ ಮಾಹಿತಿಯ ಪ್ರಕಾರ ದಿನಾಂಕ  21 - ಡಿಸೆಂಬರ್ - 2023  ರಿಂದ ಅರ್ಜಿ ಸ್ವೀಕಾರ ಆರಂಭವಾಗಲಿದೆ , ಸುಮಾರು 5 ಲಕ್ಷ ಆಭ್ಯರ್ಥಿಗಳು ಈ ಯೋಜನೆಯ ಸದುಪಯೋಗ ಪಡೆಯಲಿದ್ದಾರೆ ಎಂದು ಸರ್ಕಾರ ತಿಳಿಸಿದೆ 

ಯುವನಿಧಿಗೆ ಅರ್ಜಿ ಸಲ್ಲಿಸಿದ ನಂತರ ಜನವರಿ ತಿಂಗಳಿನಿಂದಲೇ ಹಣ ಜಮೆ ಮಾಡುವ ಬರವಸೆಯನ್ನು ನೀಡಿದೆ . 


  • ಅರ್ಜಿ ಸ್ವೀಕಾರ ಆರಂಭ          :-  21-12-2023 
  • ಅರ್ಜಿ ಸಲ್ಲಿಸುವ ವೆಬ್ಸೈಟ್       :-  https://sevasindhu.karnataka.gov.in 
  • ಮೊದಲ ಹಣ ಜಮೆ ದಿನಾಂಕ  :-  ಜನವರಿ ತಿಂಗಳು 

ಯುವ ನಿಧಿ ಜಮೆ ಮೊತ್ತ 


  • ಪದವೀದರರಿಗೆ  :- 3000 ( ಪ್ರತಿ ತಿಂಗಳು )
  • ಡಿಪ್ಲೋಮಾ ಪಾಸ್ ಆದವರಿಗೆ  :- 1500 ( ಪ್ರತಿ ತಿಂಗಳು )


ಬೇಕಾಗುವ ದಾಖಲೆಗಳು 

  1. ಆಧಾರ್ ಕಾರ್ಡ್ 
  2. sslc  ಮಾರ್ಕ್ಸ್ ಕಾರ್ಡ್ 
  3. ಪದವಿ ಪಾಸ್ ಸರ್ಟಿಫಿಕೇಟ್ 
  4. ಪದವಿ ಮುಗಿದು 6 ತಿಂಗಳು ಕಳೆದರೂ ಉದೋಗ್ಯ ಪಡೆಯದ ಕುರಿತು ಸ್ವಯಂ ದೃಡೀಕರಣ  ಅಥವಾ ನೋಟರಿ 

ಅರ್ಜಿ ಸಲ್ಲಿಕೆ ಆರಂಭವಾದ ನಂತರ ನೀವು ಅರ್ಜಿ ಸಲ್ಲಿಸಲು ಯೋಗ್ಯರಾಗಿದಲ್ಲಿ ಮೇಲಿನ ದಾಖಲೆಗಳನ್ನು ಸಿದ್ಧಪಡಿಸಿ ಸರಿಯಾದ ಕ್ರಮದಲ್ಲಿ ಅರ್ಜಿ ಸಲ್ಲಿಸಿ ಮತ್ತು ಸಹಾಯಧನದ  ಸದುಪಯೋಗ ಪಡೆದುಕೊಳ್ಳಿ .

Post a Comment (0)
Previous Post Next Post